ಶ್ರೀಗಂಧ ಕಳ್ಳ ಸಾಗಣೆ: 2 ಕೋಟಿ ರೂ. ಮೌಲ್ಯದ ಮರ ವಶಕ್ಕೆ, ಆರೋಪಿಗಳ ಬಂಧನ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕೆಆರ್ ಪುರಂ ಬಳಿಯ ಐಟಿಐ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿ ನಡೆಸಿದ್ದರು. ಬೆಂಗಳೂರು: ರಾಜ್ಯ ಅರಣ್ಯ ವಿಚಕ್ಷಣಾ ದಳದ ಪೊಲೀಸರು ಕೆಆರ್ ಪುರಂ ಬಳಿಯ ಗೋದಾಮಿನ ಮೇಲೆ ದಾಳಿ ನಡೆಸಿದ್ದು, 2 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದಾರೆ.ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕೆಆರ್ ಪುರಂ ಬಳಿಯ ಐಟಿಐ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿ ನಡೆಸಿದ್ದರು.ದಾಳಿ ವೇಳೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 2 ಕೋಟಿ ರೂಪಾಯಿ ಮೌಲ್ಯದ 50 ಕ್ಕೂ ಹೆಚ್ಚು ಶ್ರೀಗಂಧ ಮರದ ತುಂಡುಗಳನ್ನು ಪತ್ತೆ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.